ಭಾರತದ ಲವಣನಿಕ್ಷೇಪಗಳು

ಭಾರತದ ಪ್ರಮುಖ ಲವಣನಿಕ್ಷೇಪಗಳ ಸ್ಥೂಲಪರಿಚಯ ಇಲ್ಲಿ ನೀಡಿದೆ. ಅಡುಗೆ ಉಪ್ಪು ಎಂದು ಕರೆಯುವ ಸೋಡಿಯಮ್‍ಕ್ಲೋರೈಡ್ ಸಾಮಾನ್ಯವಾಗಿ ಕಡಲ ನೀರಿನಿಂದ ದೊರೆಯುತ್ತದೆ. ಆ ನೀರನ್ನು ಪಾತಿಗಳಿಗೆ ಹಾಯಿಸಿ ಸೂರ್ಯಶಾಖದಿಂದ ಇಂಗಿಸಿದಾಗ ಪಾತಿಯ ತಳದಲ್ಲಿ ಉಪ್ಪಿನ ಹರಳುಗಳ ಪದರ ಉಳಿಯುತ್ತದೆ. ಸಹಜವಾಗಿ ಈ ಕೆಲಸ ಸಮುದ್ರತೀರದ ಕೆಲವೊಂದು ಸ್ಥಳಗಳಿಗೆ ಸೀಮಿತ.

	ಹಿಮಾಲಯದ ಲವಣ ಶಿಲಾಸ್ತೊಮಗಳು, ಪಂಜಾಬಿನ ಲವಣಬೆಟ್ಟಗಳು, ರಾಜಸ್ಧಾನದ ಲವಣನಿಕ್ಷೇಪ ಮುಂತಾದವು ದೇಶಗಳ ಪ್ರಮುಖ ಲವನನಿಕ್ಷೇಪಗಳು. ಪಂಜಾಬಿನ ಉಪ್ಪಿನ ಬೆಟ್ಟಗಳು ಪ್ರಪಂಚಖ್ಯಾತಿ ಗಳಿಸಿರುವಂಥವು. ಇವು ಸಮುದ್ರ ಮಟ್ಟಕ್ಕೆ ಸುಮಾರು 762 ಮೀ 1214 ಮೀ ಎತ್ತರದಲ್ಲಿವೆ; ಕೇಂಬ್ರಿಯನ್ ಯುಗದ ಶಿಲೆಗಳ ಜೊತೆಯಲ್ಲಿರುವ ಲವಣ ಸಿಲಾಸ್ತೋಮಗಳ ಎತ್ತರ ಸುಮಾರು 457 ಮೀ. ಮೂರು ಹಂತಗಳಲ್ಲಿ ಶೇಖರವಾದ ಕಲ್ಲುಪ್ಪಿನ ಪದರಗಳಲ್ಲಿಯ ಕೆಲವು ಸುಮಾರು 30.5 ಮೀಗ¼ಷ್ಟು ದಪ್ಪವಾಗಿವೆ. ಝೀಲಮ್ ಜಿಲ್ಲೆಯ ಮೇಯೋ ಉಪ್ಪಿನ ಗಣಿಗಳಲ್ಲಿ ಸುಮಾರು 168ಮೀ ಎತ್ತರದ ಪದರಗಳಿವೆ. ಕೋಹತ್-ಪ್ರಾಂತದಲ್ಲಿ ಸುಮಾರು 304 ಮೀ ಎತ್ತರಕ್ಕೆ ಶೇಖರವಾಗಿರುವ ಪದರಗಳಿವೆ. ಇವುಗಳ ಉದ್ದ ಸುಮಾರು 12 ಕಿಮೀ. ಇಲ್ಲಿ ದೊರಕುವ ಉಪ್ಪು ಶುದ್ಧವಾದದ್ದು; ಅಡುಗೆಗೆ ಬಳಸಬಹುದಾದದ್ದು. ಕಲ್ಲುಪ್ಪಿನೊಡನೆ ಸಿಕ್ಕುವ ಮೆಗ್ನೇಸಿಯಮ್ ಮತ್ತು ಪೊಟಾಸಿಯಮ್ ಲವಣಗಳು ವ್ಯವಸಾಯ ಹಾಗೂ ಬೇರೆ ಬೇರೆ ಉದ್ಯಮಗಳಿಗೆ ಉಪಯೊಗಿಸುವಂಥವು. ಜಿಪ್ಸಮ್ (ಅಚಿSಔ4. 2ಊ2ಔ) ಮತ್ತು ಆನ್ಹೈಡ್ರೈಟ್ ಜಿಪ್ಸಮ್ (ಅಚಿSಔ4) ಎರಡೂ ಕ್ಯಾಲ್ಸಿಯಮ್ ಲವಣಗಳೇ. ಕಲ್ಲುಪ್ಪನೊಡನೆ ದೊರೆಯುವ ಇವು ಗೊಬ್ಬರ, ಕಾಗದ, ಸಿಮೆಂಟ್ ಮುಂತಾದ ಕೈಗಾರಿಕೆಗಳಿಗೆ ಅಗತ್ಯ. ಇವುಗಳಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ತಯಾರಾಗುತ್ತದೆ. ಗೊಬ್ಬರ ಮತ್ತು ಸಿಡಿಮದ್ದಿನ ಕೈಗಾರಿಕೆಗಳಿಗೆ ಬೇಕಾದ ಪೆಟ್ಲುಪ್ಪು (ಏಓಔ3) ಉತ್ತರ ಭಾರತದ ಬಯಲಿನ ಪ್ರದೇಶಗಳಲ್ಲಿ ಹಾಗೂ ಚಿಲಿ, ಈಜಿಪ್ಟ್ ಮೊದಲಾದ ದೇಶಗಳಲ್ಲಿ ವಿಶೇಷವಾಗಿ ಸಿಕ್ಕುತ್ತದೆ. ಭಾರತದಲ್ಲಿ ದೊರೆಯುವ ಸುಣ್ಣಕಲ್ಲು (ಲೈಮ್‍ಸ್ಟೋನ್) ಸಿಮೆಂಟ್ ಮತ್ತು ಕಬ್ಬಿಣದ ಕಾರ್ಖಾನೆಗೆ ಅಗತ್ಯವಾದದ್ದು. ಈ ಶಿಲೆ ಸಾಮಾನ್ಯವಾಗಿ ಪ್ರತಿಯೊಂದು ಯುಗದಲ್ಲೂ ಸಂಚಿತಗೊಂಡಿರುತ್ತದೆ.

	ಪಂಜಾಬಿನ ಕಲ್ಲುಪ್ಪಿನ ಪದರಗಳು ಕೇಂಬ್ರಿಯನ್ ಕಾಲದವು ಎಂದು ಮೊದಲೇ ತಿಳಿದಿತ್ತು. ಆದರೆ ಆಧುನಿಕ ಸಂಶೊಧನೆಗಳಿಂದ ಹಿಮಾಲಯಪರ್ವತದ ಜನಕಶಕ್ತಿಗಳ ಕ್ಷೋಭೆಯಿಂದ ಇವುಗಳ ಸ್ಧಾನ ಪಲ್ಲಟವಾಗಿದೆಯೆಂದು ವ್ಯಕ್ತವಾಗಿದೆ. ಈ ಪದರಗಳೊಡನೆ ಇರುವ ನವೀನ ಸಸ್ಯವರ್ಗ ಮತ್ತು ಜೀವ್ಯವಶೇಷಗಳ ಆಧಾರದಿಂದ ಇವು ನವೀನ ಜೀವಿಕಲ್ಪದ ಆದಿಯುಗದಲ್ಲಿ (ಇಯೊಸೀನ್-6 ಕೋಟಿ ವರ್ಷ ಪ್ರಾಚೀನ) ಸಂಚಿತವಾದವೆನ್ನಲಾಗಿದೆ.

	ರಾಜಸ್ಧಾನದ ಜಯಪುರದ ಬಳಿ ಇರುವ ಸಾಂಬಾರ್ ಸರೋವರ ಬೇಸಗೆಯಲ್ಲಿ ಸಾಮಾನ್ಯವಾಗಿ ಬತ್ತಿಹೋಗುತ್ತದೆ; ನಡುವೆ ಕೊಂಚ ಜವುಗಿರಬಹುದು. ಆಗ ಇದರ ಬಹುಭಾಗ ಮಿನುಗುವ ಅಡುಗೆಉಪ್ಪಿನ ಹರಳುಗಳ ತೆಳುವಾದ ಪೊರೆಯಿಂದ ಆವೃತವಾಗುತ್ತದೆ. ಇದರ ವಿಸ್ತಾರ ಸುಮಾರು 233 ಚಕಿಮೀ. ಈ ಸರೋವರದ ನೀರಿನಲ್ಲಿ 99 ಸೋಡಿಯಮ್ ಲವಣಗಳಿರುವುದು ಗಮನಾರ್ಹ.	
(ಎ.ಎನ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ